ನೆನಪ ಪುಟ್ಟ ತುಣುಕುಗಳು ಚೆಲ್ಲಿ ಮೂಡಿವೆ ಹೊಸ ಕವಲುಗಳು
ದಾರಿ ಉದ್ದಕೂ ಅಣಕವಾಡುವ ಕ್ಷಣ ಕ್ಷಣಗಳ ಕುರುಹುಗಳು
ತುಂಬಾ ದೂರ ನಡೆದಾಗಿದೆ ಜೊತೆಯಿಲ್ಲದೆ ಬರಿಗಾಲಲಿ
ಒಂಟಿತನವೇ ಹಾಯೆನಿಸಿದೆ ಇಷ್ಟು ದೂರ ಬಂದ ಮೇಲೆ ||
ಸುದ್ದಿ ಕಂತೆಗಳ ಸಂತೆಯೊಳಗೆ ಸುಸ್ತಾಗಿ ಅಬ್ಬರದ ಅಲೆಗಳ ಜೊತೆಯಲ್ಲಿ ನಡೆಯುತಲಿ ಸಾಗರದ ದಂಡೆಯಲಿ ಮರಳ ರಾಶಿ ಮಡಿಲಲ್ಲಿ ಮೌನಗಾನವೇ ಹಾಯೆನಿಸಿದೆ ಇಷ್ಟು ದೂರ ಬಂದ ಮೇಲೆ ||