Monday, June 19, 2006

(Poem) ಎನ್ನ ಮನದನ್ನೆ - ೨

ಎನ ನಲ್ಲೆಯ ಬಗ್ಗೆ ಏನೆಂದು ವಿವರಿಸಲಿ
ಸರಳ ಸುಂದರತೆಯ ಸಾಕಾರ ಇವಳು ||

ಒಲ್ಲದಿಹ ಮಾತಿಗೆ ಸನ್ನೆಯಲೇ ನಕಾರ
ಪ್ರೀತಿ ಬಯಸುತಿಹ ಜೀವಕೆ ಒಲವಿನಲಿ ಸಹಕಾರ
ತುಂಟ ಕುಡಿ ನೋಟದಲೇ ಸೆರೆ ಹಿಡಿವ ರತಿ ಇವಳು
ಬಳುಕು ನಡೆ ನೀಳ ಜಡೆಯ ಮನ ಕದ್ದ ಒಡತಿ ||

ಜತೆಗೂಡಿ ನನ್ನೊಡನೆ ಎಲೆಯಡಿಕೆ ಮೆಲ್ಲುತಲಿ
ಸುದ್ದಿ ಕಂತೆಯ ಮಹಾಪೂರವನೇ ಕರೆಯುವಳು
ಅವರಿವರ ಸುದ್ದಿ ನಮಗೇತಕೆ ಬಿಡಿ
ಕೊನೆಯಲ್ಲಿ ನನ್ನ ಬಾಯ್ಮುಚ್ಚಿಸುವಳೇ ಇವಳು! ||

- uShai

7 comments:

  1. It's a nice poem. Even the first one and the introduction lines are also good.

    Do you intened to write on the poems (sort of explanation and the idea behind a poem)by Great Kannada writers like Kuvempu, Bendre, Adiga, etc.

    ReplyDelete
  2. ನಮಸ್ಕಾರ,
    ಅಹಂ ಬ್ಲಾಗೋಸ್ಮಿ ಅಂತ ಹೇಳಿಕೊಂಡು ತಿರುಗಾಡುತ್ತಿರುವವರಿಗೆ....
    :)

    ಮನದಾಳದ ಮಾತುಗಳು ನವಿರಾಗಿ ಮೂಡಿಬಂದಿವೆ..
    ಚೆನ್ನಾಗಿ ಬ್ಲಾಗಿದೆ...!

    ReplyDelete
  3. "ಜತೆಗೂಡಿ ನನ್ನೊಡನೆ ಎಲೆಯಡಿಕೆ ಮೆಲ್ಲುತಲಿ..."
    ಪರವಾಗಿಲ್ಲರೀ, ಎಲ್ಲಾ ಸುದ್ದಿಗಳನ್ನು ಚರ್ಚಿಸೋ ಹೊತ್ತಿಗೆ ಒಳ್ಳೇ ಹವ್ಯಾಸ!

    ReplyDelete
  4. Yeah. i think that's what you should also do. I second Sanjeev's idea.
    I dont' know what you may want to say...
    ----------------------------------------------------------------
    If ever you felt you were at a loss because it was so hard to blog in KANNADA. Don't ever
    fret again! There's http://quillpad.in/kannada/ just to do it for you!
    Try it! Enjoy it!

    ReplyDelete
  5. this is firs time i enter kannada blogs this is fantastic to read my mothere toungue. more than that i just read a poem which is in kan anda
    thanks for this memorable time bye thn

    ReplyDelete