ಪುಟ್ಟು ಕಂದಮ್ಮ
ನೀ ಅತ್ತರೆ ನಾ ಅಳುವೆ
ನೀ ನಕ್ಕರೆ ನಾ ನಗುವೆ
ನಿನ್ನೊಡನೆ ನಾನಿರಲು
ಜಗವನ್ನೇ ನಾ ಮರೆವೆ ||
ಅಕ್ಕರೆಯ ಮುದ್ದು ನಗು
ಸವಿ ಜೇನ ಹನಿಯಂತೆ
ಪುಟ್ಟ ಕಾಲ್ಗಳ ಗೆಜ್ಜೆ ದನಿ
ಇಂಪು ನಾದದ ಲಹರಿ ||
ನಾ ಬರುವುದ ನೀ ಕಾಯುವೆ
ನಿನ್ನ ಅಪ್ಪುಗೆ ಕೆಂದಾವರೆ
ನಿನ್ನ ಪ್ರೀತಿಯ ಕಣ ಕಣವೂ
ನನ್ನ ಬಾಳಿಗೆ ಮಹದಾಸರೆ ||
nice poem ...
ReplyDeleteನಿಮ್ಮ ಕವನಗಳು ಬಹಳ ಸೊಗಸಾಗಿದೆ.
ReplyDeleteನಾವು ಕನ್ನಡಹನಿಗಳ ಬಳಗ ದಿಂದ ನಿಮ್ಮಲ್ಲಿ ಒಂದು ವಿನಂತಿ.
ಈ ನಿಮ್ಮ ಕವನ, ಹನಿಗವನ, ಹಾಸ್ಯ ಮುಂತಾದುವುಗಳು ಇನ್ನೂ ಹೆಚ್ಚು ಜನರನ್ನು ಸೇರಲ್ಲೆಂದು ಆಶಿಸುತ್ತೇವೆ. ಈ ನಿಟ್ಟಿನಲ್ಲಿ ನಿಮ್ಮ ಕವನ, ಹನಿಗವನ, ಹಾಸ್ಯವನ್ನು ನಮ್ಮ ಅಂತರ್ಜಾಲದಲ್ಲಿ ಪ್ರಕಟಿಸುವಿರಾ ?
ನಮ್ಮನ್ನು ಸಂಪರ್ಕಿಸಬೇಕಾದಲ್ಲಿ : kannadahanigalu@gmail.com
its really nice
ReplyDelete